ಡೆ ಮಾರ್ಗನ್, ಅಗಸ್ಟಸ್
	1806-1871. ಭಾರತದಲ್ಲಿ ಹುಟ್ಟಿದ ಇಂಗ್ಲಿಷ್ ಗಣಿತ ತರ್ಕಶಾಸ್ತ್ರವಿದ. ಮದರಾಸು ಪ್ರಾಂತದ (ಇಂದಿನ ತಮಿಳುನಾಡು) ಮಧುರೆಯಲ್ಲಿ ಜನನ. ಕೇಂಬ್ರಿಜಿನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಆಗ ಹೊಸದಾಗಿ ಸ್ಥಾಪಿತವಾಗಿದ್ದ ಲಂಡನ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕನಾಗಿ (1828) ಇದೇ ಹುದ್ದೆಯಲ್ಲಿ (1831-35ರ ವರೆಗಿನ ಐದು ವರ್ಷಗಳ ವಿನಾ) 1867ರಲ್ಲಿ ನಿವೃತ್ತನಾಗುವವರೆಗೂ ಮುಂದುವರಿದ. 1866ರಲ್ಲಿ ಸ್ಥಾಪಿತವಾದ ಲಂಡನ್ ಮ್ಯಾಥ್‍ಮ್ಯಾಟಿಕಲ್ ಸೊಸೈಟಿಯ ಮೊದಲ ಅಧ್ಯಕ್ಷನಾಗುವ ಗೌರವ ಈತನದು.

	ಡೆ ಮಾರ್ಗನ್‍ನ ಕೃತಿಗಳಲ್ಲಿ ಗಣಿತಶಾಸ್ತ್ರe್ಞÁನದ ವಿಸ್ತರಣೆಗಿಂತ ಆ e್ಞÁನಕ್ಕೆ ದೃಢನಾದ ತಾರ್ಕಿಕ ತಳಹದಿಯನ್ನು ಒದಗಿಸುವತ್ತಲಿನ ಕೆಲಸವೇ ಹೆಚ್ಚಾಗಿದೆ. ಆಧುನಿಕ ತರ್ಕಶಾಸ್ತ್ರದ ಪಿತಾಮಹನೆನಿಸಿದ ಜಾರ್ಜ್ ಬೂಲ್‍ನಂತೆಯೇ ಡೆ ಮಾರ್ಗನ್ ಕೂಡ ಗಣಿತದ ನವೀನ ದೃಷ್ಟಿಕೋನದ ಬೆಳೆವಣಿಗೆಯತ್ತ ಕೆಲಸ ಮಾಡಿದ. ಇವನಿಗೆ ಆ ಕಾಲದ ಹೆಸರಾಂತ ಗಣಿತಶಾಸ್ತ್ರಜ್ಞ ಸರ್ ವಿಲಿಯಮ್ ರೋವಾನ್ ಹ್ಯಾಮಿಲ್ಟನ್ ಹಾಗೂ ತತ್ತ್ವಶಾಸ್ತ್ರಜ್ಞ ಸರ್ ವಿಲಿಯಮ್ ಹ್ಯಾಮಿಲ್ಟನ್ ಎಂಬವರೊಡನೆ ಸಂಪರ್ಕವಿತ್ತು. ಡೆ ಮಾರ್ಗನ್‍ನ ಪ್ರಕಾರ ಖಚಿತ ವಿe್ಞÁನಕ್ಕೆ ಗಣಿತಶಾಸ್ತ್ರ ಹಾಗೂ ತರ್ಕಶಾಸ್ತ್ರಗಳು ಎರಡು ಕಣ್ಣುಗಳಂತಿರುವುದರಿಂದ ಈ ಸಂಪರ್ಕ ಬಹಳ ಉಪಯೋಗಕರವಾಗಿದ್ದಿತು. ಈ ದಿಶೆಯಲ್ಲಿ ಅವನು (ಸ್ವತಂತ್ರವಾಗಿ ಪಿಯರ್ಸ್‍ನಿಂದಲೂ ಗುರುತಿಸಲ್ಪಟ್ಟಿದ್ದ) ಹೆಸರಾಂತ ಡೆ ಮಾರ್ಗನ್ನನ ನಿಯಮವನ್ನು ಸ್ಥಾಪಿಸಿದ್ದಾನೆ. ಇದನ್ನು ಸ್ಥೂಲವಾಗಿ

	((ಃ) = (ಃ ; ((ಃ) = (ಃ’
ಎಂಬ ಸಮೀಕರಣಗಳಿಂದ ತಿಳಿಸಬಹುದು. ಸಾಮಾನ್ಯ ಬಳಕೆಯಲ್ಲಿರುವ ಸಾಧನ ಮಾರ್ಗಕ್ಕೆ ಗಣಿತಾನುಮಿತಿ (ಮ್ಯಾಥ್‍ಮ್ಯಾಟಿಕಲ್ ಇಂಡಕ್ಷನ್) ಎಂಬ ಹೆಸರನ್ನು ಮೊದಲು ಬಳಸಿದವ (1838) ಈತನೇ. ಹಾಗೆಯೇ ಭಿನ್ನರಾಶಿಗಳಿಗೆ ಅಡ್ಡಗೆರೆಗೆ ಬದಲು ಅಚ್ಚಿನ ಅನುಕೂಲತೆಯ ದೃಷ್ಟಿಯಿಂದ ಓರೆಗೆರೆಯ (/) ಬಳಕೆಯನ್ನು ಮೊದಲು ಸೂಚಿಸಿದಾತನೂ ಇವನೇ.

	ಡೆ ಮಾರ್ಗನ್ ಹಲವಾರು ಬರಹಗಳ, ಕೃತಿಗಳ ಮತ್ತು ಪುಸ್ತಕಗಳ ಲೇಖಕ ಕೂಡ ಹೌದು. ಇವನ ಅನೇಕ ಬರಹಗಳು ಪೆನ್ನಿ ಮತ್ತು ಬ್ರಿಟಿಷ್ ಎನ್ಸೈಕ್ಲೊಪೀಡಿಯಗಳಲ್ಲಿ ಪ್ರಚುರವಾಗಿವೆ. ಈತನ ಡಿಫರೆನ್ಷಿಯಲ್ ಕ್ಯಾಲ್ಕುಲಸ್ ಮತ್ತು ಬಜೆಟ್ ಆಫ್ ಪ್ಯಾರಡಾಕ್ಸಸ್ ಹೆಸರುವಾಸಿಯಾದ ಪುಸ್ತಕಗಳು. ಹ್ಯಾಮಿಲ್ಟನನ ಕ್ವಟರ್ನಿಯಾನ್ಸ್‍ನ ಕೆಲವು ರೂಪುರೇಖೆಗಳನ್ನು ಡೆ ಮಾರ್ಗನ್ನನ ಕೃತಿ ಟ್ರಿಗೊನೊಮಿಟ್ರಿ ಎಂಡ್ ಡಬಲ್ ಆಲ್ಜೀಬ್ರದಲ್ಲಿ ಕಾಣಬಹುದು.
ಲಂಡನ್ನಿನಲ್ಲಿ ಮರಣ (18.03.1971).
(ಎಸ್.ಎಸ್.ಆರ್.ಐ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ